ಅಂತಾರಾಷ್ಟ್ರೀಯ ಖ್ಯಾತಿಹೊಂದಿದ ಭರತನಾಟ್ಯ, ಮತ್ತು ಕೂಚಿಪುಡಿ ನಾಟ್ಯ ಶೈಲಿಯಲ್ಲಿ ಅದ್ಭುತ ಸಾಧಿಕಿ, ನೃತ್ಯಾಂಗನೆ, ಪ್ರತಿಭಾ ಪ್ರಹ್ಲಾದ್, ೩ ದಶಕಗಳಲ್ಲಿ ತಮ್ಮ ಕನಸಿನಲ್ಲೂ ನೃತ್ಯದಲ್ಲೇ ತನ್ಮಯರಾಗಿರುವ ಪ್ರಹ್ಲಾದ್ ,೨ ಸಾವಿರಕ್ಕೂ ಮೀರಿ ವಿಶ್ವದಾಧ್ಯಂತ ಕಾರ್ಯಕ್ರಮಗಳನ್ನು ಕೊಟ್ಟ ಹೆಗ್ಗಳಿಕೆಗೆ ಪಾತ್ರರು. == ಜನನ, ವಿದ್ಯಾಭ್ಯಾಸ == ಪ್ರತಿಭಾ ಪ್ರಹ್ಲಾದ್, ಬೆಂಗಳೂರಿನಲ್ಲಿ ಜನವರಿ ೨೯, ೧೯೫೫ ರಲ್ಲಿ ಜನಿಸಿದರು. ತಂದೆಯವರ ಹೆಸರು ಪ್ರಹ್ಲಾದ್, ಮತ್ತು ತಾಯಿ ಪ್ರೇಮ. ಇಬ್ಬರೂ ಶಿಕ್ಷಕರು. ವಿದ್ಯಾಭ್ಯಾಸದಲ್ಲಿ ಬಹಳ ಆಸಕ್ತರಾಗಿದ್ದ ಪ್ರತಿಭಾ ಪ್ರಹ್ಲಾದ್, ಬಿ. ಎಡ್ ಮತ್ತು ಕಮ್ಯುನಿಕೇಷನಲ್ಲಿ ಎಮ್. ಎಸ್. ಪದವಿಗಳಿಸಿದರು. ಆದರೆ ಬಾಲ್ಯದಿಂದ ಭರತನಾಟ್ಯ, ಮತ್ತು ಕುಚಿಪುಡಿ ನೃತ್ಯಗಳ ಬಗ್ಗೆಯೂ ಅತೀವ ಆಸಕ್ತಿ. ಪ್ರತಿಭಾ ಆಯ್ಕೆಮಾಡಿಕೊಂಡ ಭರತನಾಟ್ಯ ಗುರುಗಳಲ್ಲಿ ಪ್ರೊ. ಯು.ಎಸ್. ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿಯವರು ಪ್ರಥಮರು. ಬಳಿಕ, ಭರತನಾಟ್ಯವನ್ನೂ ಬಲ್ಲ, ಸುನಂದಾ ದೇವಿಯವರ ಹತ್ತಿರ ಕೂಚಿಪುಡಿ ನೃತ್ಯ ಪಾಠವನ್ನು ಮುಂದುವರೆಸಿದರು. ಹೀಗೆ ಪ್ರಶಿಕ್ಷಣಗಳಿಸಿದ ಬಳಿಕ, ಅವರು ೧೯೭೧ ರಲ್ಲಿ 'ರಂಗಪ್ರವೇಶ' ಮಾಡಿದರು. ಹಾಗೆಯೇ ರಾಷ್ಟ್ರದಲ್ಲಿ ನಡೆಯುವ ನೃತ್ಯಪ್ರದರ್ಶಗಳು, ನೃತ್ಯೋತ್ಸವಗಳು ಮೊದಲಾದವುಗಳಲ್ಲಿ ಭಾವವಹಿಸಿ, ತಮ್ಮ ಆತ್ಮ ಸ್ಥರ್ಯವನ್ನು ಹೆಚ್ಚಿಸಿಕೊಂಡರು. == ಭರತನಾಟ್ಯ, ಮತ್ತು ಕೂಚಿಪುಡಿ ನೃತ್ಯಶೈಲಿಗೆ ಅಂತಾರಾಷ್ಟ್ರೀಯ ಖ್ಯಾತಿ == ಭರತನಾಟ್ಯ ಮತ್ತು ಕೂಚಿಪುಡಿ ನಾಟ್ಯಕ್ಕೆ ಅಂತಾರಾಷ್ಟ್ರೀಯ ಸಮ್ಮಾನವನ್ನು ತಂದುಕೊಟ್ಟ ಭಾರತೀಯರ ಸಾಲಿನಲ್ಲಿ ಪ್ರತಿಭಾ ಪ್ರಹ್ಲಾದ್ ಮೇರುಸ್ಥಾನವನ್ನು ಗಳಿಸಿದ್ದಾರೆ.ಅವರು ಭಾಗವಹಿಸಿದ ರಾಷ್ಟ್ರದ ಜನಪ್ರಿಯ ನೃತ್ಯೋತ್ಸವಗಳು : ಖುಜುರಾಹೋ ಕೋನಾರ್ಕ್, ಉಸ್ತಾದ್ ಅಲ್ಲಾ ಉದ್ದೀನ್ ಖಾನ್ ಉತ್ಸವ, ಪಂಡಿತ್, ದುರ್ಗಾಲಾಲ್ ಸ್ಮಾರಕ ನರ್ತನ, 'ಸ್ಪಿರಿಟ್ ಆಫ್ ಫ್ರೀಡಮ್ ಕಾನ್ಸರ್ಟ್ಸ್ ಫಾರ್ ನ್ಯಾಷನಲ್ ಇಂಟಿಗ್ರೇಷನ್' ಪುಣೆ ಗಣೇಶೋತ್ಸವ್, ತಂಜಾವೂರ್ ನೃತ್ಯ- ನಾಟ್ಯಾಂಜಲಿ (ಚಿದಂಬರಂ) == ಅಂತಾರಾಷ್ಟೀಯ ಖ್ಯಾತಿಯ ನೃತ್ಯೋತ್ಸವಗಳು == ಜಪಾನಿನ ಓಕೊಯಾಮ ಇಂಟರ್ ನ್ಯಾಷನಲ್ ಡಾನ್ಸ್ ಫೆಸ್ಟಿವಲ್, ಮ್ಯಾನ್ಚೆಸ್ಟರ್ ವಿಶ್ವ ಕನ್ನಡ ಸಮ್ಮೇಳನ, ಯುನೈಟೆಡ್ ನೇಶನ್ಸ್ ಇಂಟೀರಮ್ ಸಮಿತಿ ಆಹ್ವಾನಿಸಿದ ಮನಿಲ್ಲಾ ಅಂತಾರಾಷ್ಟ್ರೀಯ ನೃತ್ಯ ಸಮ್ಮೇಳನ ಭಾಗಿಯಾಗಿದ್ದಾರೆ. == ಅಮೆರಿಕದಲ್ಲಿ == ಅಮೆರಿಕಾ ಕ್ಯಾಲಿಫೋರ್ನಿಯ ವಿಶ್ವ ವಿದ್ಯಾಲಯದಲ್ಲಿ ಉನ್ನತ ಸ್ತರದ ನಾಟ್ಯ ತರಗತಿಗಳನ್ನು ಸಮರ್ಥವಾಗಿ ನಡೆಸಿಕೊಟ್ಟಿದ್ದಾರೆ. ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಪತ್ರಿಕೆಗಳಲ್ಲಿ ಸಂಶೋಧನಾತ್ಮಕ ಲೇಖನಗಳನ್ನು, ನೃತ್ಯ ವಿಮರ್ಶಕಿಯಾಗಿ ನಿರ್ವಹಿಸಿದ ಕಾರ್ಯಗಳು, ದೂರದರ್ಶನ ಧಾರಾವಾಹಿಗಳಲ್ಲಿ ಅಭಿನಯಿಸಿ, ನೆಕ್ವೇರ್ ಇನ್ ಸ್ಟೋನ್ ಸಾಕ್ಷ್ಯ ಚಿತ್ರದಲ್ಲಿ ನಿರ್ವಹಿಸಿದ ನೃತ್ಯ ಕಾರ್ಯಗಳು, ಮೊದಲಾದ ಕ್ರಿಯಾಶೀಲ ಚಟುವಟಿಗಳಿಗಾಗಿ ಅಪಾರ ಪ್ರಶಂಸೆಗಳಿಸಿದ್ದಾರೆ. == ಪ್ರಶಸ್ತಿಗಳು == ಸಿಂಗಾರಮಣಿ (ಸುರ್ ಸಿಂಗಾರ್, ಮುಂಬಯಿ) ನಾಟ್ಯ ಭಾರತಿ-ವಿರೂಪಾಕ್ಷ ವಿದ್ಯಾರಣ್ಯ ಮಹಾಪೀಠ, ಮಹಿಳಾ ಶಿರೋಮಣೆ-ಶಾಸ್ತ್ರೀಯ ನೃತ್ಯಕ್ಕೆ, ಶಿರೋಮಣಿ ಫೌಂಡೇಶನ್ ದೆಹಲಿ ಬೆಸ್ಟ್ ಡಾನ್ಸರ್ ಭುವನೇಶ್ವರ್, ಕರ್ನಾಟಕ ಕಲಾಶ್ರೀ ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿ ,ಮುಂತಾದ ಹತ್ತು ಹಲವು ಗೌರವ ಪ್ರಶಸ್ತಿಗಳು ಸಂದಿವೆ. ಬಾಹ್ಯ ಸಂಪರ್ಕ : [೧]